Friday, October 24, 2008

...ಚಂದಿರ...

ತಿಂಗಳ ಚಂದಿರ
ತಿರುಗುತಾ ಬಂದ
ಇರುಳಿಗೆ ಸುಂದರ
ಬೆಳಕನು ತಂದ

ಸರಸವ ಹರುಷವ
ನಮಗೆ ತಂದ
ನಮ್ಮಯ ಮನವ
ಮುದ್ದಿಸ ಬಂದ

ಅಂಗಳ ಆಟಿಕೆ
ಜೊತೆಗೆ ಬಂದ
ಇರುಳ ದಿಟಕೆ
ಚಂದಿರ ಚಂದ

ಭೇದ ಭಾವ
ಇರದೆ ಬಂದ
ನಗು ನಗುತಾ
ಕಲಿಯಿರಿ ಎಂದ.